Home
WELCOME TO THE OFFICIAL WEBSITE OF SULLIA TOWN PANCHAYATH
(GIS based Property tax information system) in National Awards for E-Governance 2011.
****************************************
ಸುಳ್ಯ ಪಟ್ಟಣ ಪಂಚಾಯತ್ ಇತಿಹಾಸ : ಸುಳ್ಯ ಪ.ಪಂ.ವು ಜೂನ್ 1, 1996 ರಂದು ರಚನೆಗೊಂಡಿದ್ದು, 18 ಮತದಾನ ವಿಭಾಗಗಳನ್ನು ಒಳಗೊಂಡಿದೆ. 2001 ರ ಜನಗಣತಿಯ ಪ್ರಕಾರ ಒಟ್ಟು 18,028 ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ 9380 ಪುರುಷರು, 8648 ಮಹಿಳೆಯರನ್ನು ಹೊಂದಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ. 88.70 ರಷ್ಟು ವಿದ್ಯಾಭ್ಯಾಸ ಪ್ರಮಾಣ ಹೊಂದಿದೆ. ಒಟ್ಟು ಜನಸಾಂದ್ರತೆ 922.00 ಮತ್ತು ಒಟ್ಟು 3580 ಕುಟುಂಬಗಳನ್ನು ಒಳಗೊಂಡಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಸೇರಿ ಒಟ್ಟು 18 ಸದಸ್ಯರನ್ನೊಳಗೊಂಡಿದೆ. ಮುಖ್ಯಾಧಿಕಾರಿಯವರನ್ನು ಒಳಗೊಂಡು ಒಟ್ಟು 14 ಮಂದಿ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
About the Town : Sullia is a town in Sulya taluk in Dakshina Kannada district. Sullia Town Panchayath was formed in the year 1996, June 1st. The area covered by the TP is 6.61 Sq.K.M. The town has been formed by the combination of 18 council wards. Sullia is a small town surrounded with evergreen wooded mountains in the Western Ghats range in South India. The Town high humidity and temperature ranging 25'C to 35"C . Town has covered with 18,028 population and 4,839 properties.
ಪಟ್ಟಣ ಪಂಚಾಯತ್ ಧ್ಯೇಯೋದ್ಧೇಶಗಳು : ಪ.ಪಂ. ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಪ.ಪಂ.ನ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಶುಚಿತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಪ್ಲಾಸ್ಟಿಕ್ ನಿಷೇಧ, ಶೌಚಾಲಯದ ವ್ಯವಸ್ಥೆ, ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ವೆಬ್ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಪಾರದರ್ಶಕದ ಮೂಲಕ ಒದಗಿಸುವುದು.
*****************************************
ಗಣಕೀಕರಣ ಯೋಜನೆಗಳು : ![]()
Sullia TP goes to online under Karnataka Municipal Reforms Project. Mainly Birth & Death, Helpline, Website, Finance.
ಜನನ-ಮರಣ ಗಣಕೀಕರಣ : ಜನನ-ಮರಣ ಧಾಖಲೆಗಳು ದಿನಾಂಕ : 24-02-2010 ರಂದು ಆನ್ ಲೈನ್ ಗೊಂಡಿದ್ದು, ಪ.ಪಂ. ನಲ್ಲಿ ಲಭ್ಯವಿರುವ 1996 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪ.ಪಂ. ನ ವೆಬ್ಸೈಟ್ ನ ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.sulliatown.gov.in.
ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ : 25-02-2010 ರಂದು ಆನ್ ಲೈನ್ ಗೊಂಡಿದ್ದು, ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08257-230414, ಅಧಿಕೃತ ಅಂತರ್ಜಾಲ : www.sulliatown.gov.in.
ಆಸ್ತಿ ತೆರಿಗೆ ಯೋಜನೆ : ಈ ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 18 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.
ಸ್ಥಳೀಯ ಸಂಸ್ಥೆ ವೆಬ್ಸೈಟ್ : ಸುಳ್ಯ ಪಟ್ಟಣ ಪಂಚಾಯತದ ಅಧಿಕೃತ ಅಂತರ್ಜಾಲ : www.sulliatown.gov.in ಕೆ.ಎಂ.ಆರ್.ಪಿ. ಯೋಜನೆಯಡಿ ದಿನಾಂಕ : 03-02-2009 ರಂದು ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.
* * This page is maintained by N. Rohithaksha - Chief Officer II * *

